ಹಾಡು, ಹಳ್ಳಿ- ಇವೆರಡು ನನ್ನ ಜೀವನದ ಬೇರುಗಳು. ಗಟ್ಟಿಯಾಗಿ ಬೇರೂರಿಕೊಂಡು, ಆಕಾಶದತ್ತ ಕೈ ಚಾಚಿ, ಕನಸುಗಳನ್ನು ಹಿಡಿಯುತ್ತಾ, ಮನಸ್ಸುಗಳನ್ನು ಮಿಡಿಯುತ್ತಾ ಸಾಗುವ ಜೀವನದ ಒಂದು ಕಿರುಪರಿಚಯವನ್ನುನನ್ನ ಮಾತೃಭಾಷೆಯಲ್ಲಿ ಮಾಡುವ ಪ್ರಯತ್ನವೇ ಈ ಬ್ಲಾಗ್.
Get link
Facebook
X
Pinterest
Email
Other Apps
-
ಮರುಗುವ ಮನಸ್ಸಿನ ಮೂಲೆಯಲ್ಲಿ ಮುದುಡಿದ ಮಂದಹಾಸ ಮೂಡಲಿ ಮುಖಚಂದ್ರಮದ ಮೇಲೆ ಮಣ್ಣಿನ ಮುದ್ದೆ ಮತ್ತೆ ಮಣ್ಣಾಗುವ ಮುನ್ನಾ ಮೊಳಗಲಿ ಮಾನವೀಯತೆಯ ಮಂತ್ರ
ಈ ಜೀವನದ ಏರು ಪೇರುಗಳು ನನಗೆ ಕಾಮನಬಿಲ್ಲಿನ ಬಣ್ಣಗಳು ನೋವು ನಲಿವು, ಕಣ್ಣೀರು ಪನ್ನೀರು ಇವುಗಳಿಂದಲೆ ಹುಟ್ಟುತ್ತವೆ ನನ್ನ ಕನಸುಗಳು ಬೆಲ್ಲದ ಸವಿಯನ್ನು ಸವಿಯುತ್ತ, ಬೇವಿನ ಕಹಿಯನ್ನು ಮರೆಯುತ್ತ, ಜೀವನವನ್ನು ಅನುಭವಿಸುತ್ತ ಇರುವ ಹೃದಯಗಳು ಅಲ್ಲಿರುವ ಅನುಭವಗಳೇ ಈ ಹನಿಗವನದ ಪದಗಳು
ನಾನು: ನನಗೆ ಬರೆಯೋದು ಇಷ್ಟ ಅವರು: ಹೌದಾ? ಕವನಗಳನ್ನು ಬರಿದಿದ್ದೀರಾ? ನಾನು: ಇಲ್ಲ ಅವರು: ಹಾಗಾದರೆ ಕಥೆಗಳನ್ನು ಬರೆದಿರಬೇಕು ನಾನು: ಇಲ್ಲ ಅವರು: ಓಹ್! ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತೀರಾ? ನಾನು: ಅಯ್ಯೋ, ಇಲ್ಲಾರೀ ಅವರು: ಮತ್ತೆ ಇನ್ನೇನು ಬರೆಯೋಕಾಗತ್ಟೆ?!!!!! ನಾನು: ಬ್ಲಾಗ್:)
Comments