Posts

Showing posts from 2008

ನೀ ಇರಲು ಜೊತೆಯಲ್ಲಿ

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ ಚಿತ್ರ : ಗುಣ ನೋಡಿ ಹೆಣ್ಣು ಕೊಡು ಸಾಹಿತ್ಯ : ಆರ್. ಏನ್. ಜಯಗೋಪಾಲ್ ಸಂಗೀತ : ಎಲ್. ಎಂ. ರಂಗರಾವ್ ಹಾಡಿದವರು: ಎಸ್. ಪಿ. ಬಾಲಸುಬ್ರಮಣ್ಯಂ ಬಹಳ ಇಂಪಾದ, ಮನಸ್ಸಿಗೆ ಹಿತ ಕೊಡುವ ಹಾಡು. ಸಾಹಿತ್ಯ ಎಷ್ಟು ಸರಳವಾಗಿದೆ. ಆದರೆ ಅಷ್ಟೆ ಆಳವಾಗಿದೆ. ನಿಷ್ಕಲ್ಮಶ ಪ್ರೀತಿಯನ್ನು ಕೊಡುವ ಬಾಳ ಸಂಗಾತಿ ಇದ್ದರೆ, ಇನ್ನೇನು ಬೇಕು? ರಂಗರಾವ್ ಅವರ ಸಂಗೀತ ಬಹಳ ಸುಮಧುರವಾಗಿದೆ. ನನಗೆ ಈ ಹಾಡು ಕೇಳಿದಾಗ, ಯಾವುದೋ ಹೂಬನದಲ್ಲಿ ಕೂತಂತೆ, ತಂಪಾದ ಗಾಳಿ ಬೀಸಿದಂತೆ ಅನುಭವವಾಗುತ್ತದೆ. ಎಸ್. ಪಿ ಅವರು ಹಾಡಿದ ಈ ಹಾಡು ನಮ್ಮನ್ನು ಬೇರೆ ಭಾವನಾಲೋಕಕ್ಕೆ ಕರೆದೊಯ್ಯುತ್ತದೆ. ನಟ ಶ್ರೀನಾಥ್ ಅವರ ಪತ್ನಿ ಗೀತ ಶ್ರೀನಾಥ್ ಗೆ, ತಮ್ಮ ಪತಿ ನಟಿಸಿದ ಹಾಡುಗಳಲ್ಲಿ ಇದು ಬಹಳ ಇಷ್ಟವಂತೆ. ಸರಿ, ನಿಮ್ಮನ್ನು ಮನಮೆಚ್ಚಿದವರ ಜೊತೆ, ಈ ಹಾಡಿನ ಗುಂಗಿನಲ್ಲಿ ಮುಂದುವರೆಯಲು ಬಿಡುತ್ತೇನೆ. ಟಾಟಾ. :)

ಮಾತೃಭಾಷೆಯಲ್ಲಿ ಶಿಕ್ಷಣ

ಮಾತೃ ಭಾಷೆಯಲ್ಲಿ ಶಿಕ್ಷಣದ ಬಗ್ಗೆ ನಮ್ಮಲ್ಲಿ ಹಲವಾರು ಬಾರಿ ಚರ್ಚೆ ನಡೆದಿದೆ, ನಡೆಯುತ್ತಲೇ ಇರುತ್ತವೆ. ಹೌದು, ಮಾತೃ ಭಾಷೆ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗ ಆಗಿರಬೇಕು. ಆದರೆ ಮಾತೃ ಭಾಷೆಯೊಂದನ್ನೇ ಕಲಿಯಬೇಕು ಎಂಬುದು ಬಾವಿಯೊಳಗಿನ ಕಪ್ಪೆಯಂತೆ ಎಂಬುದು ನನ್ನ ಅನಿಸಿಕೆ. ಇಂದು ಇಡೀ ಜಗತ್ತೇ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಿದೆ. ಹೀಗಿದ್ದಾಗ ಉಳಿದ ಜಗತ್ತಿನ ಜೊತೆ ವ್ಯವಹಾರ ಮಾಡುವಾಗ ಆಂಗ್ಲ ಭಾಷೆ ಗೊತ್ತಿದ್ದರೆ ಉತ್ತಮ. ನಾವು ಮಾತೃ ಭಾಷೆಯೊಂದನ್ನೇ ಕಲಿತು, ಅಷ್ಟು ಸಮರ್ಪಕವಾಗಿ ವ್ಯವಹರಿಸಲಾಗದೆ ಕೀಳರಿಮೆ ಬೆಳೆಸಿಕೊಳ್ಳುವುದು ಏನು ನ್ಯಾಯ? ನಮ್ಮ ಶಿಕ್ಷಣದಲ್ಲಿ -ಮಾತೃ ಭಾಷೆ ಮತ್ತು ಆಂಗ್ಲ ಭಾಷೆ -ಇವೆರಡಕ್ಕೂ ಒತ್ತಿರಲಿ. ಆಂಗ್ಲ ಭಾಷೆ ಕಲಿತ ತಕ್ಷಣ, ಮಾತೃ ಭಾಷೆ ಮರೆಯಬೇಕೆಂದೇನಿಲ್ಲವಲ್ಲ. ಮಾತೃ ಭಾಷೆಯನ್ನೂ ಪ್ರೀತಿಸುತ್ತ, ಆಧರಿಸುತ್ತ, ಆಂಗ್ಲ ಭಾಷೆಯನ್ನೂ ನಮ್ಮದಾಗಿಸಿಕೊಂಡು ನಡೆಯುವುದೇ ಜಾಣತನ ಎನ್ನುವುದು ನನ್ನ ಅಭಿಮತ.

ಅಮ್ಮನೇ ಮೊದಲ ಗುರು

ಕನ್ನಡ ಬ್ಲಾಗ್ ಶುರು ಮಾಡಬೇಕೆಂಬುದು ತುಂಬ ದಿನದ ಆಸೆ. ಆದರೆ ಶುರು ಮಾಡಿದರೆ ಸಾಲದು, ಅದನ್ನು ಪೋಷಿಸಬೇಕು. ಇದನ್ನೇ ಕಾರಣಾಂತರದಿಂದ ಮಾಡಲಾಗಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದಾದರೂ ಈ ಬ್ಲಾಗ್ನಲ್ಲಿ ಅಲ್ಪ ಸ್ವಲ್ಪ ಚಟುವಟಿಕೆ ಶುರು ಮಾಡಬೇಕೆಂದಿರುವೆ.:) ನನ್ನ ಪ್ರೌಢ ಶಾಲೆಯಲ್ಲಿ ICSE ಸ್ಟ್ಯಾಂಡರ್ಡ್ ಆಗಿದ್ದರಿಂದ, ಮೊದಲಿನ ಭಾಷೆ ಇಂಗ್ಲಿಷ್, ಎರಡನೇದು ಹಿಂದಿ ಹಾಗೂ ತ್ರಿತೀಯ ಭಾಷೆ ಕನ್ನಡವಾಗಿತ್ತು. ಹೀಗೆ ಸ್ಕೂಲಿನಲ್ಲಿ ಸ್ಟೇಟ್ಸ್ syllabus ಆದರೂ ಕೂಡ ಕನ್ನಡ ತ್ರಿತೀಯ ಭಾಷೆಯಲ್ಲಿಯೇ ಮುಂದುವರೆಯಿತು. ಹೀಗಾಗಿ ನನ್ನ ಶಿಕ್ಷಣದ ಬಗ್ಗೆ ಗೊತ್ತಿದವರಿಗೆ, ನಾನು ಕನ್ನಡ ಕಾದಂಬರಿಗಳನ್ನು ಓದುವಾಗ ಬಹಳ ಆಶ್ಚರ್ಯವಾಗುತ್ತಿತ್ತು. ಆಂಗ್ಲ ಮಾಧ್ಯಮದಲ್ಲಿ ಇದ್ದು ಕೊಂಡು ಕನ್ನಡವನ್ನು ಇಷ್ಟು ಓದಲು ಎಲ್ಲಿ ಕಲಿತೆ ಎಂದು ಕೇಳುತಿದ್ದರು. ಮನೆಯೇ ಮೊದಲ ಪಾಠಶಾಲೆ, ಅಮ್ಮನೇ ಮೊದಲ ಗುರು ಅನ್ನುವುದು ನನ್ನ ಪಾಲಿಗೆ ಅಕ್ಷರಶಃ ಸತ್ಯ. ಶಾಲೆಯ ದಿನಗಳಿಂದ ಅಮ್ಮ ನನಗೆ ಕನ್ನಡದ ವಾರಪತ್ರಿಕೆ, ದಿನಪತ್ರಿಕೆಗಳನ್ನು ಓದಿ ಹೇಳುತಿದ್ದಳು ಹಾಗೂ ಓದಿಸುತ್ತಿದ್ದಳು. ಕನ್ನಡ ಚಲನಚಿತ್ರಗಳಿಗೆ ಹೋದಾಗ ಅದರಲ್ಲಿ ಬರುವ ಎಲ್ಲ ಉಪಾಧಿಗಳನ್ನು ಓದಿಹೇಳುತ್ತಿದ್ದಳು. ಹೀಗೆ ನಿಧಾನವಾಗಿ ಕಥೆಗಳನ್ನು, ಧಾರಾವಾಹಿಗಳನ್ನು ಓದಲು ಶುರು ಮಾಡಿದೆ. ಕಾಲೇಜಿಗೆ ಬರುವ ಹೊತ್ತಿಗೆ ಕಾದಂಬರಿಗಳನ್ನು ಓದುತಿದ್ದೆ. ಕನ್ನಡದ ಕವಿಗಳ ಬಗ್ಗೆ ಮಾಹಿತಿಯನ್ನು ಕೊಡುತಿದ್ದಳು ಅಮ್ಮ. ಆದ್ದರಿಂದ