Posts

Showing posts from March, 2017
ಎಷ್ಟೋ ಭಾವನೆಗಳನ್ನು ಲೇಖನಿಯಿಂದ ಎಷ್ಟು ಸುಲಭವಾಗಿ ಹಂಚ್ಕೋಬಹುದು. ಆದ್ರೆ ಮಾತಾಡೋಕೆ ಹೋದ್ರೆ, ಹಾಗೆ ನಾಲಿಗೆಲೇ ಮರಗೆಟ್ಟು ಹೋಗ್ತವೆ. ಬರವಣಿಗೆಲಿ ತಪ್ಪಾದ್ರೆ, ಅದನ್ನ ಅಳಿಸಿ ಮತ್ತೆ ಬರೀಬಹುದು. ಆದ್ರೆ ನುಡಿದ ಮಾತು ಮತ್ತೆ ವಾಪಸ್ ಸರಿ ಮಾಡೋದು ಕಷ್ಟ, ಅಲ್ವಾ?
ನವಿಲು ಗರಿಯ ಬಣ್ಣಗಳನ್ನು ತನ್ನ ಕುಂಚದಲ್ಲಿ ಹುಡುಕಲಾರದೆ ಸೋತ ಕಲಾವಿದ ಮೆಲ್ಲಗೆ ಮುಗುಳು ನಗೆ ಬೀರಿದ - ಗರಿಯನ್ನು ಶಿರದಲ್ಲಿ ಧರಿಸಿದವ
ಹೃದಯದ ನೋವಿನ ದನಿ ಯಾರಿಗೂ ಕಾಣದ ಹಾಗೆ ಮರೆಯಲ್ಲಿ ನಿಲ್ಲು ನೀ ಎಂದು ಪರಿ ಪರಿಯಾಗಿ ಬೇಡಿದರೂ ಉಕ್ಕಿ ಹರಿಯಿತು ತುಂಬಾ ಹಟಮಾರಿ ಈ ಕಂಬನಿ
ಜೀನ್ಸ್ ಪ್ಯಾಂಟ್ ಒಗೆಯಲು ಭಾರ, ನನ್ನ ನೀರೆ ಸಾಕಾಗಿತ್ತು ನಿನಗೆ ನಮ್ಮ ಇಳಕಲ್ ಸೀರೆ ಇತ್ತೀಚೆಗೆ ಬೇರೆ ಬರುತ್ತಿಲ್ಲ ನಳದಲ್ಲಿ ಸರಿಯಾಗಿ ಜಲಧಾರೆ  ಹಾಗೆಂದು ಮೈಕ್ರೋ ಮಿನಿಯ ಮೊರೆ ಹೋಗದಿರು ಧೀರೆ
On the occasion of World Sparrow Day ಗುಬ್ಬಿ, ನಮಗಾಗಿದೆ ನಿನ್ನ ಚಿಲಿಪಿಲಿಯ ಗೀಳು ನಮ್ಮ ಮನೆಯ ಮೂಲೆಯಲ್ಲಿ ನಿನ್ನ ಅಚ್ಚುಕಟ್ಟಿನ ಗೂಡನ್ನು ಆಳು ಕೊಡುವೆ ಬೇಕಾದಷ್ಟುಕಾಳು ಗುಬ್ಬಿ, ನಮ್ಮ ಬೆಂಗಳೂರಿನಲ್ಲೂ ನೀ ಬಾಳು ಗಾಜಿನ ಅರಮನೆಗಳು ಎದ್ದಿವೆ ಸಾಲು ಸಾಲು ಅಭಿವೃದ್ಧಿಯ ನೆರಳಿನಲ್ಲಿ ಮರಗಳಿಗೆ ಉರುಳು ಆದರೆ, ಓ ಪುಟಾಣಿ ಗೆಳೆಯ, ಜೀವನದಲ್ಲಿ ಎಂದೆಂದು ಇರುವುದು ಈ ಏಳು ಬೀಳು ಗುಬ್ಬಿ, ಮತ್ತೆ ನಮ್ಮ ಬೆಂಗಳೂರಿನಲ್ಲಿ ನೀ ಬಂದು ಬಾಳು