Posts

Showing posts from 2009

ಬ್ಲಾಗರ್

ನಾನು: ನನಗೆ ಬರೆಯೋದು ಇಷ್ಟ ಅವರು: ಹೌದಾ? ಕವನಗಳನ್ನು ಬರಿದಿದ್ದೀರಾ? ನಾನು: ಇಲ್ಲ ಅವರು: ಹಾಗಾದರೆ ಕಥೆಗಳನ್ನು ಬರೆದಿರಬೇಕು ನಾನು: ಇಲ್ಲ ಅವರು: ಓಹ್! ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತೀರಾ? ನಾನು: ಅಯ್ಯೋ, ಇಲ್ಲಾರೀ ಅವರು: ಮತ್ತೆ ಇನ್ನೇನು ಬರೆಯೋಕಾಗತ್ಟೆ?!!!!! ನಾನು: ಬ್ಲಾಗ್:)

ಸುಗಮ ಸಂಗೀತದ ಧ್ರುವ ತಾರೆ ಇನ್ನಿಲ್ಲ

ನಾನು ಈ ಅಂಕಣವನ್ನು ಬರೆಯಲು ತಡಮಾಡಿದೆ. ಯಾಕೆ ಅಂದರೆ ನನಗೆ ರಾಜು ಅನಂತಸ್ವಾಮಿ ಅವರ ಧಿಡೀರ್ ಮರಣದ ಸುದ್ದಿ ಶಾಕ್ ಆಗಿ ಬಂತು. ನಾನು ಅವರನ್ನು ಭೇಟಿ ಆಗಿರಲಿಲ್ಲ. ಆದರೆ ಅವರ ತಂದೆ ಹಾಗೂ ಅಕ್ಕನ ಭೇಟಿಯಾಗುವ ಸುಯೋಗ ಒದಗಿತ್ತು. ಮೊದಲಿನಿಂದಲೂ ಅವರ ಪರಿವಾರದ ಬಗ್ಗೆ ಗೌರವ ಇತ್ತು. ಮೈಸೂರು ಅನಂತಸ್ವಾಮಿ ಅವರ ನಂತರ ರಾಜು ಅವರು ಆ ಸ್ಥಾನವನ್ನು ತುಂಬಬಹುದು ಎಂಬ ನಿರೀಕ್ಷೆ ಇದ್ದದ್ದು ಸುಳ್ಳಲ್ಲ. ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜು ಅವರು ತಮ್ಮ ಸ್ವಂತ ಛಾಪನ್ನು ಮೂಡಿಸಿದ್ದರು. ಸಂಗೀತದಲ್ಲಿ ಬಹುಮುಖ ಪ್ರತಿಭೆಯುಳ್ಳವರು ಆಗಿದ್ದರು. ತಂದೆಯ ಹಾಡುಗಳನ್ನು, ರತ್ನಂ ಅವರ ಪದಗಳನ್ನು ಬಹಳ ಸುಲಲಿತವಾಗಿ ಹಾಡುತಿದ್ದರು. ಜೊತೆಯಲ್ಲಿ ಅವರದೇ ಆದ ಸಂಗೀತ ಸಂಯೋಜಿಸಿದ ಭಾವಗೀತೆಗಳನ್ನು ಕೂಡ ಹಾಡುತಿದ್ದರು, ಹಾಡಿಸುತ್ತಿದ್ದರು. ಚಿಕ್ಕಂದಿನಿಂದ ಸಂಗೀತದ ವಾತವರಣದಲ್ಲಿ ಬೆಳೆದ ಅವರಿಗೆ ಸಂಗೀತದ ಬಗ್ಗೆ ಅಪಾರ ಜ್ಞಾನವಿತ್ತು, ಪ್ರೀತಿಯಿತ್ತು. ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಕೂಡ ಕಾಲಿಟ್ಟಿದ್ದರು. ಇಂತಾ ಬಹುಮುಖ ಪ್ರತಿಭೆಯ , ನಗುಮುಖದ ರಾಜು ಅವರಿಗೆ ಸಾಯುವ ವಯಸ್ಸು ಖಂಡಿತ ಆಗಿರಲಿಲ್ಲ. ಅವರಿಂದ ಇನ್ನೂ ಬಹಳ ನಿರೀಕ್ಷೆ ಇತ್ತು. ಆದರೆ ಯಾವ ನೋವನ್ನು ಮರೆಯಲೋ ಏನೋ,ಅವರು ಕುಡಿತದ ದಾಸರಾಗಿದ್ದರಂತೆ. ಆ ಚಟವೇ ಅವರ ಅಂತ್ಯಕ್ಕೆ ಕಾರಣವಾಯಿತು. ಅವರ ಮರಣದ ಸುದ್ದಿ ಗೊತ್ತಾದಾಗ ನನಗೆ ಅನಿಸಿದ್ದು- ಕುಡಿತದ ಚಟ ಬದಲು ಅವರು ಸಂಗೀತವನ್ನೇ ಅವಲಂಬಿಸಿದ್ದರೆ, ಇ

ಓ ನನ್ನ ಕಂದ

ತೊದಲು ನುಡಿಗಳ ಹೇಳುತ್ತಾ ಮೆಲ್ಲ ಮೆಲ್ಲನೆ ನಡೆಯುತ್ತಾ ನೀ ನನ್ನೆಡೆಗೆ ಬಂದಾಗ ಮಮತಾಮಯಿ ಆಗುವೆನು ನಾನು ಓ ನನ್ನ ಕಂದ ಸುತ್ತಲಿರುವ ಪರಿಸರದ ಪರಿಚಯ ಮಾಡಿಕೊಳ್ಳುತ್ತಾ ಏಳುತ್ತಾ ಬೀಳುತ್ತಾ ಪಾಠಗಳನ್ನು ಕಲಿಯುತ್ತಾ ತನ್ನ ಬೇಕು-ಬೇಡಗಳನ್ನು ಅರಿಯುತ್ತಾ ನೀ ನಡೆದಾಗ ನಿನ್ನ ಗುರು ಆಗುವೆನು ನಾನು ಓ ನನ್ನ ಕಂದ ಜಗತ್ತನ್ನು ವಿಸ್ಮಯದ ಕಣ್ಣಿಂದ ನೋಡುತ್ತಾ ಭೇಧ ಭಾವಗಳಿಲ್ಲದ ಪ್ರೀತಿಯನ್ನು ಸುರಿಸುತ್ತಾ ಕ್ಷಣದಲ್ಲಿ ನೋವ ಮರೆತು ಬೊಚ್ಚು ಬಾಯಿಯ ತೋರಿಸಿ ನೀ ನಕ್ಕಾಗ ನಿನ್ನ ಶಿಷ್ಯೆ ಆಗುವೆನು ನಾನು ಓ ನನ್ನ ಕಂದ ಜೀವನದ ಪಥದಲ್ಲಿ ಸುಖ ಬಂದಾಗ, ನಿನ್ನ ಹಿಂದೆ ಕಷ್ಟ ಬಂದಾಗ, ನಿನ್ನ ಮುಂದೆ ದಾರಿ ಕಾಣದಾಗ ನಿನ್ನ ಜೊತೆಯಲ್ಲಿ ಎಂದೆಂದೂ ಇರುವೆ ನಾನು ಓ ನನ್ನ ಕಂದ