ಅಮ್ಮನೇ ಮೊದಲ ಗುರು

ಕನ್ನಡ ಬ್ಲಾಗ್ ಶುರು ಮಾಡಬೇಕೆಂಬುದು ತುಂಬ ದಿನದ ಆಸೆ. ಆದರೆ ಶುರು ಮಾಡಿದರೆ ಸಾಲದು, ಅದನ್ನು ಪೋಷಿಸಬೇಕು. ಇದನ್ನೇ ಕಾರಣಾಂತರದಿಂದ ಮಾಡಲಾಗಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದಾದರೂ ಈ ಬ್ಲಾಗ್ನಲ್ಲಿ ಅಲ್ಪ ಸ್ವಲ್ಪ ಚಟುವಟಿಕೆ ಶುರು ಮಾಡಬೇಕೆಂದಿರುವೆ.:) ನನ್ನ ಪ್ರೌಢ ಶಾಲೆಯಲ್ಲಿ ICSE ಸ್ಟ್ಯಾಂಡರ್ಡ್ ಆಗಿದ್ದರಿಂದ, ಮೊದಲಿನ ಭಾಷೆ ಇಂಗ್ಲಿಷ್, ಎರಡನೇದು ಹಿಂದಿ ಹಾಗೂ ತ್ರಿತೀಯ ಭಾಷೆ ಕನ್ನಡವಾಗಿತ್ತು. ಹೀಗೆ ಸ್ಕೂಲಿನಲ್ಲಿ ಸ್ಟೇಟ್ಸ್ syllabus ಆದರೂ ಕೂಡ ಕನ್ನಡ ತ್ರಿತೀಯ ಭಾಷೆಯಲ್ಲಿಯೇ ಮುಂದುವರೆಯಿತು. ಹೀಗಾಗಿ ನನ್ನ ಶಿಕ್ಷಣದ ಬಗ್ಗೆ ಗೊತ್ತಿದವರಿಗೆ, ನಾನು ಕನ್ನಡ ಕಾದಂಬರಿಗಳನ್ನು ಓದುವಾಗ ಬಹಳ ಆಶ್ಚರ್ಯವಾಗುತ್ತಿತ್ತು. ಆಂಗ್ಲ ಮಾಧ್ಯಮದಲ್ಲಿ ಇದ್ದು ಕೊಂಡು ಕನ್ನಡವನ್ನು ಇಷ್ಟು ಓದಲು ಎಲ್ಲಿ ಕಲಿತೆ ಎಂದು ಕೇಳುತಿದ್ದರು.

ಮನೆಯೇ ಮೊದಲ ಪಾಠಶಾಲೆ, ಅಮ್ಮನೇ ಮೊದಲ ಗುರು ಅನ್ನುವುದು ನನ್ನ ಪಾಲಿಗೆ ಅಕ್ಷರಶಃ ಸತ್ಯ. ಶಾಲೆಯ ದಿನಗಳಿಂದ ಅಮ್ಮ ನನಗೆ ಕನ್ನಡದ ವಾರಪತ್ರಿಕೆ, ದಿನಪತ್ರಿಕೆಗಳನ್ನು ಓದಿ ಹೇಳುತಿದ್ದಳು ಹಾಗೂ ಓದಿಸುತ್ತಿದ್ದಳು. ಕನ್ನಡ ಚಲನಚಿತ್ರಗಳಿಗೆ ಹೋದಾಗ ಅದರಲ್ಲಿ ಬರುವ ಎಲ್ಲ ಉಪಾಧಿಗಳನ್ನು ಓದಿಹೇಳುತ್ತಿದ್ದಳು. ಹೀಗೆ ನಿಧಾನವಾಗಿ ಕಥೆಗಳನ್ನು, ಧಾರಾವಾಹಿಗಳನ್ನು ಓದಲು ಶುರು ಮಾಡಿದೆ. ಕಾಲೇಜಿಗೆ ಬರುವ ಹೊತ್ತಿಗೆ ಕಾದಂಬರಿಗಳನ್ನು ಓದುತಿದ್ದೆ. ಕನ್ನಡದ ಕವಿಗಳ ಬಗ್ಗೆ ಮಾಹಿತಿಯನ್ನು ಕೊಡುತಿದ್ದಳು ಅಮ್ಮ. ಆದ್ದರಿಂದ ಇಂದು ನನಗೆ ನನ್ನ ಮಾತೃಭಾಷೆಯ ಸಾಹಿತ್ಯದ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿದ್ದರೆ, ಅದಕ್ಕೆ ನನ್ನ ಅಮ್ಮನೇ ಕಾರಣ. ಹೌದು, ಅಮ್ಮನೇ ನನ್ನ ಮೊದಲ ಗುರು.

Comments

suhās said…
I feel that there should be a better way to connect with you. Really glad that I came across your blogs. Now starting from the beginning (to read, ofcourse). Keep writing...
Madhooo said…
Hey thanks, Suhas. I hope I will become more regular at blogging though.:)

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ