Posts

Showing posts from April, 2017
ಜರ್ ಎಂದು ಜಾರಿಬಿದ್ದ ನೋವಿನ ನೆನಪು ಚುರ್ ಎಂದು ಮನಸ್ಸಿನಲ್ಲಿ ಪಿಸುಗುಡುತ್ತಿರುವಾಗ ಗುರ್ ಎಂದು ಕೋಪ ಹೊರಗೆ ಹೊಗೆಯಾಡುತ್ತಿರುವಾಗ ಡುರ್ ಎಂದು ಕಂದಮ್ಮ ಬೊಚ್ಚು ಬಾಯಿಂದ ನಕ್ಕಾಗ ಪುರ್ ಎಂದು ನೋವು, ನೆನಪು ಎಲ್ಲ ಹಾರಿ ಹೋಯಿತು ಸರ್ ಎಂದು ಜೀವ ಖುಷಿಯಲ್ಲಿ ತೇಲಿತು
ಮರುಗುವ ಮನಸ್ಸಿನ ಮೂಲೆಯಲ್ಲಿ ಮುದುಡಿದ ಮಂದಹಾಸ  ಮೂಡಲಿ ಮುಖಚಂದ್ರಮದ ಮೇಲೆ  ಮಣ್ಣಿನ ಮುದ್ದೆ ಮತ್ತೆ ಮಣ್ಣಾಗುವ ಮುನ್ನಾ  ಮೊಳಗಲಿ ಮಾನವೀಯತೆಯ ಮಂತ್ರ
ನೇತ್ರ ದಾನ ಕಣ್ಣು ತೆರೆದರೆ ಕರಗುವ ಕನಸುಗಳ ಬೆನ್ನಟ್ಟಿ ಓಡುವ ಬದುಕಿನ ಪಯಣ ಮುಗಿದಾಗ ಹೊಸ ಕನಸುಗಳು ಅದೇ ಕಣ್ಣಿನಲ್ಲಿ ಇನ್ನೊಂದು ರೆಪ್ಪೆಯ ನೆರಳಲಿ ಅರಳಲಿ