ಜರ್ ಎಂದು ಜಾರಿಬಿದ್ದ ನೋವಿನ ನೆನಪು ಚುರ್ ಎಂದು ಮನಸ್ಸಿನಲ್ಲಿ ಪಿಸುಗುಡುತ್ತಿರುವಾಗ ಗುರ್ ಎಂದು ಕೋಪ ಹೊರಗೆ ಹೊಗೆಯಾಡುತ್ತಿರುವಾಗ ಡುರ್ ಎಂದು ಕಂದಮ್ಮ ಬೊಚ್ಚು ಬಾಯಿಂದ ನಕ್ಕಾಗ ಪುರ್ ಎಂದು ನೋವು, ನೆನಪು ಎಲ್ಲ ಹಾರಿ ಹೋಯಿತು ಸರ್ ಎಂದು ಜೀವ ಖುಷಿಯಲ್ಲಿ ತೇಲಿತು
Posts
Showing posts from 2017
- Get link
- X
- Other Apps
On the occasion of World Sparrow Day ಗುಬ್ಬಿ, ನಮಗಾಗಿದೆ ನಿನ್ನ ಚಿಲಿಪಿಲಿಯ ಗೀಳು ನಮ್ಮ ಮನೆಯ ಮೂಲೆಯಲ್ಲಿ ನಿನ್ನ ಅಚ್ಚುಕಟ್ಟಿನ ಗೂಡನ್ನು ಆಳು ಕೊಡುವೆ ಬೇಕಾದಷ್ಟುಕಾಳು ಗುಬ್ಬಿ, ನಮ್ಮ ಬೆಂಗಳೂರಿನಲ್ಲೂ ನೀ ಬಾಳು ಗಾಜಿನ ಅರಮನೆಗಳು ಎದ್ದಿವೆ ಸಾಲು ಸಾಲು ಅಭಿವೃದ್ಧಿಯ ನೆರಳಿನಲ್ಲಿ ಮರಗಳಿಗೆ ಉರುಳು ಆದರೆ, ಓ ಪುಟಾಣಿ ಗೆಳೆಯ, ಜೀವನದಲ್ಲಿ ಎಂದೆಂದು ಇರುವುದು ಈ ಏಳು ಬೀಳು ಗುಬ್ಬಿ, ಮತ್ತೆ ನಮ್ಮ ಬೆಂಗಳೂರಿನಲ್ಲಿ ನೀ ಬಂದು ಬಾಳು