ನೀ ಇರಲು ಜೊತೆಯಲ್ಲಿ

ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ

ಚಿತ್ರ : ಗುಣ ನೋಡಿ ಹೆಣ್ಣು ಕೊಡು
ಸಾಹಿತ್ಯ : ಆರ್. ಏನ್. ಜಯಗೋಪಾಲ್
ಸಂಗೀತ : ಎಲ್. ಎಂ. ರಂಗರಾವ್
ಹಾಡಿದವರು: ಎಸ್. ಪಿ. ಬಾಲಸುಬ್ರಮಣ್ಯಂ

ಬಹಳ ಇಂಪಾದ, ಮನಸ್ಸಿಗೆ ಹಿತ ಕೊಡುವ ಹಾಡು. ಸಾಹಿತ್ಯ ಎಷ್ಟು ಸರಳವಾಗಿದೆ. ಆದರೆ ಅಷ್ಟೆ ಆಳವಾಗಿದೆ. ನಿಷ್ಕಲ್ಮಶ ಪ್ರೀತಿಯನ್ನು ಕೊಡುವ ಬಾಳ ಸಂಗಾತಿ ಇದ್ದರೆ, ಇನ್ನೇನು ಬೇಕು? ರಂಗರಾವ್ ಅವರ ಸಂಗೀತ ಬಹಳ ಸುಮಧುರವಾಗಿದೆ. ನನಗೆ ಈ ಹಾಡು ಕೇಳಿದಾಗ, ಯಾವುದೋ ಹೂಬನದಲ್ಲಿ ಕೂತಂತೆ, ತಂಪಾದ ಗಾಳಿ ಬೀಸಿದಂತೆ ಅನುಭವವಾಗುತ್ತದೆ. ಎಸ್. ಪಿ ಅವರು ಹಾಡಿದ ಈ ಹಾಡು ನಮ್ಮನ್ನು ಬೇರೆ ಭಾವನಾಲೋಕಕ್ಕೆ ಕರೆದೊಯ್ಯುತ್ತದೆ. ನಟ ಶ್ರೀನಾಥ್ ಅವರ ಪತ್ನಿ ಗೀತ ಶ್ರೀನಾಥ್ ಗೆ, ತಮ್ಮ ಪತಿ ನಟಿಸಿದ ಹಾಡುಗಳಲ್ಲಿ ಇದು ಬಹಳ ಇಷ್ಟವಂತೆ.

ಸರಿ, ನಿಮ್ಮನ್ನು ಮನಮೆಚ್ಚಿದವರ ಜೊತೆ, ಈ ಹಾಡಿನ ಗುಂಗಿನಲ್ಲಿ ಮುಂದುವರೆಯಲು ಬಿಡುತ್ತೇನೆ. ಟಾಟಾ. :)

Comments

ಮಧು,

ನೀನು ಕನ್ನಡದಲ್ಲಿ ಬ್ಲಾಗ್ ಬರಿತಾಯಿರೋ ವಿಶ್ಯ ಗೊತ್ತೇ ಇರ್ಲೆ. ಮಾತೃಭಾಷೆನಲ್ಲಿ ಬರದ್ರೆ ಎನೋ ಒಂತರಾ ಖುಷಿ.

"ನೀ ಇರಲು ಜೊತೆಯಲ್ಲಿ" ನನ್ನ ಫೇವ್ರೇಟ್ ಹಾಡು. ಅದನ್ನ ಸಂಗ್ರಹದಲ್ಲಿ ಹಾಕಕು (http://nammasangraha.blogspot.com/)
Madhooo said…
ಧನ್ಯವಾದ, ಯಜ್ಞೇಶ್.:) ಹೌದು, ಮಾತೃಭಾಷೆಯಲ್ಲಿ ಬರೆಯಲು ಬಹಳ ಖುಷಿಯಾಗುತ್ತಿದೆ.:)

Popular posts from this blog

ಓ ನನ್ನ ಕಂದ