ಮಾತೃಭಾಷೆಯಲ್ಲಿ ಶಿಕ್ಷಣ

ಮಾತೃ ಭಾಷೆಯಲ್ಲಿ ಶಿಕ್ಷಣದ ಬಗ್ಗೆ ನಮ್ಮಲ್ಲಿ ಹಲವಾರು ಬಾರಿ ಚರ್ಚೆ ನಡೆದಿದೆ, ನಡೆಯುತ್ತಲೇ ಇರುತ್ತವೆ.
ಹೌದು, ಮಾತೃ ಭಾಷೆ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗ ಆಗಿರಬೇಕು. ಆದರೆ ಮಾತೃ ಭಾಷೆಯೊಂದನ್ನೇ ಕಲಿಯಬೇಕು ಎಂಬುದು ಬಾವಿಯೊಳಗಿನ ಕಪ್ಪೆಯಂತೆ ಎಂಬುದು ನನ್ನ ಅನಿಸಿಕೆ. ಇಂದು ಇಡೀ ಜಗತ್ತೇ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಿದೆ. ಹೀಗಿದ್ದಾಗ ಉಳಿದ ಜಗತ್ತಿನ ಜೊತೆ ವ್ಯವಹಾರ ಮಾಡುವಾಗ ಆಂಗ್ಲ ಭಾಷೆ ಗೊತ್ತಿದ್ದರೆ ಉತ್ತಮ. ನಾವು ಮಾತೃ ಭಾಷೆಯೊಂದನ್ನೇ ಕಲಿತು, ಅಷ್ಟು ಸಮರ್ಪಕವಾಗಿ ವ್ಯವಹರಿಸಲಾಗದೆ ಕೀಳರಿಮೆ ಬೆಳೆಸಿಕೊಳ್ಳುವುದು ಏನು ನ್ಯಾಯ?

ನಮ್ಮ ಶಿಕ್ಷಣದಲ್ಲಿ -ಮಾತೃ ಭಾಷೆ ಮತ್ತು ಆಂಗ್ಲ ಭಾಷೆ -ಇವೆರಡಕ್ಕೂ ಒತ್ತಿರಲಿ. ಆಂಗ್ಲ ಭಾಷೆ ಕಲಿತ ತಕ್ಷಣ, ಮಾತೃ ಭಾಷೆ ಮರೆಯಬೇಕೆಂದೇನಿಲ್ಲವಲ್ಲ. ಮಾತೃ ಭಾಷೆಯನ್ನೂ ಪ್ರೀತಿಸುತ್ತ, ಆಧರಿಸುತ್ತ, ಆಂಗ್ಲ ಭಾಷೆಯನ್ನೂ ನಮ್ಮದಾಗಿಸಿಕೊಂಡು ನಡೆಯುವುದೇ ಜಾಣತನ ಎನ್ನುವುದು ನನ್ನ ಅಭಿಮತ.

Comments

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ